ಕಲ್ಯಾಣಪುರದ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿನ ಪ್ರೌಢಶಾಲಾ ರಕ್ಷಕ-ಶಿಕ್ಷಕ ಸಭೆ.

ಕಲ್ಯಾಣಪುರಃ ಇಲ್ಲಿನ ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿನ ಪ್ರೌಢಶಾಲಾ ರಕ್ಷಕ-ಶಿಕ್ಷಕ ಸಭೆಯನ್ನು ಜೂನ್ 23 ಹಾಗೂ 24ರಂದು ನಡೆಸಲಾಯಿತು.

10ನೇ ತರಗತಿಯ ಪೋಷಕರನ್ನುದ್ದೇಶಿಸಿ ಡಾ. ಜಯರಾಮ್ ಶೆಟ್ಟಿಗಾರ್ ಮುಖ್ಯಸ್ಥರು ಇತಿಹಾಸ ವಿಭಾಗ ಹಾಗೂ 8 ಮತ್ತು 9ನೇ ತರಗತಿಯ ಪೋಷಕರನ್ನುದ್ದೇಶಿಸಿ ಡಾ. ಹರಿಣಾಕ್ಷಿ ಎಂ.ಡಿ ಮುಖ್ಯಸ್ಥರು ಕನ್ನಡ ವಿಭಾಗ ಇವರು ಹದಿಹರೆಯದ ಮಕ್ಕಳ ಮನಸ್ಥಿತಿಯ ಕುರಿತು ಮಾತನಾಡಿದರು. ತದನಂತರ ರಕ್ಷಕ-ಶಿಕ್ಷಕ ಸಭೆಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಈ ಎರಡೂ ದಿನಗಳ ಸಭೆಯ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಫಾ। ವಲೇರಿಯನ್ ಮೆಂಡೋನ್ಸಾರವರು ವಹಿಸಿದ್ದರು. ಶಾಲಾ ಮುಖ್ಯ ಉಪಾಧ್ಯಾಯಿನಿ ಸಿ। ಶಾಂತಿ ಪ್ರಮೀಳ ಡಿಸೋಜಾ ಹಾಗೂ ತರಗತಿ ಅಧ್ಯಾಪಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *